ಮುಖಪುಟ

ಕಾಂಪ್-ಮ್ಯೂಸಿಕ್ ಯೂರೋಪಿಯನ್ ಸಂಶೋಧನಾ ಪರಿಷತ್ತಿನಿಂದ ಪೋಷಿತ ಸಂಶೋಧನಾ ಯೋಜನೆಯಾಗಿದ್ದು ಬಾರ್ಸಿಲೋನಾದ ಪೊಂಪೆವು ಫಾಬ್ರಾ ವಿಶ್ವವಿದ್ಯಾಲಯದ ಡಾ. ಚಾವಿಯೇ ಸೆರ್ರಾ ರವರಿಂದ ಸಂಘಟಿತವಾಗಿದೆ. ಈ ಯೋಜನೆಯು ವಿಶ್ವದ ಐದು ಸಂಗೀತ ಪ್ರಕಾರಗಳ ಮೇಲೆ ಸಂಶೋಧನೆ ನಡೆಸಿದೆ: ಭಾರತದ ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ, ಟರ್ಕಿಯ ಮಕಾಂ ಸಂಗೀತ, ಚೀನಾದ ಬೀಜಿಂಗ್ ಆಪೆರಾ ಹಾಗು ಅರಬ್ಬೀ-ಅಂಡಲಲೂಸೀಯ (ಮಾಘ್ರೆಬ್) ಸಂಗೀತ. ಗಣಕಯಂತ್ರಗಳನ್ನು ಬಳಸಿ ಈ ಸಂಗೀತ ಪ್ರಕಾರಗಳ ಅತಿ ಮುಖ್ಯ ವೈಶಿಷ್ಟ್ಯತೆಗಳನ್ನೂ, ಸಂಗೀತವನ್ನು ರೂಪಿಸುವ ಸ್ವರ ವಿನ್ಯಾಸ, ಛಂದೋಗತಿ (ರಿದಂ) ಹಾಗು ರಚನಾ ವೈಶಿಷ್ಟ್ಯಗಳನ್ನು ಅರಿಯಲು ಕ್ರಮಾವಳಿಗಳನ್ನು ಸಂಶೋಧಿಸುವ ಕಾರ್ಯದಲ್ಲಿ ಕಾಂಪ್-ಮ್ಯೂಸಿಕ್ ತಂಡ ನಿರತವಾಗಿದೆ. ಆಯಾ ಸಂಗೀತದ ಸಂಶೋಧನೆಯಲ್ಲಿ ಅಲ್ಲಿಯ ಸಂಸ್ಕೃತಿಯ ಮಾಹಿತಿಯನ್ನು ಪರಿಪೂರ್ಣವಾಗಿ ಬಳಸುವ ಯತ್ನವು ಈ ಯೋಜನೆಯ ವಿಶೇಷತೆಯಾಗಿದೆ. 


 

dunya.compmusic.upf.edu